Thursday, August 1, 2013

                                     ಹಗಲು ಕನಸು




ಅದೆಂದೋ ಎದ್ದಿದ್ದೆ, ದಿನ ನೆನಪಿಲ್ಲ - ಕತ್ತಲಲ್ಲಿಯೇ
ತಡವರಿಸಿ ಎದ್ದವನಿಗೆ ಕತ್ತಲಶ್ಟೇ ಗೋಚರ.
ತೀರದಲ್ಲೇನೋ ಹೊಳೆದಂತಾಯಿತು - ಹತ್ತಿರದಲ್ಲಿಯೇ
ಎಂಬಂತೆ ಭ್ರಮೆ.[೧]

ಕಣ್ಣುಗಳೇಕೋ ಬೇಡವೆನ್ನುತ್ತಿದ್ದವು, ನಿರಾಚರ
ಪ್ರಪಂಚದ ಗೊಡವೆಯೇ ಬೇಡವೆಂಬಂತೆ.
ಆದರೂ ಮನಸ್ಸು ಬಿಡುತ್ತಿಲ್ಲ - ಕನಸುಗಳಲ್ಲಿಯೇ
ಬಿದ್ದುಕೊಂಡಂತೆ ಭಾಸ.[೨]

ಬರಡು ದಿನಗಳ ನಡುವೆ - ಬದಲಾವಣೆ
ಎಂಬಂತೆ ಮಳೆ ಬೀಳುತ್ತಿದೆ, ಚಳಿಯ ಪರಿವೆ ಇನ್ನೇಕೆ
ಗುಡಿಯಲ್ಲೇ ಕಳೆಯುವಾತನಿಗೆ.
ಗುರಿಯೇ ಇಲ್ಲದಂತೆ.[೩]

ಆಸರೆ ತಪ್ಪಿದ ಹಕ್ಕಿಯಂತಾದ ಜೀವಕ್ಕೆ - ಆಸೆಗಳು
ಮುತ್ತಿಕೊಂಡಿವೆ, ನನಸಾಗುವ ಪರಿಧಿಗಳು ದೂರವೇ ಇವೆ
ಎನ್ನುವಂತೆ - ಕತ್ತಲಲ್ಲಿಯೇ ಕಣ್ಣುಗಳ ಹುಡುಕಾಟ -
ನಿರಂತರವೆಂಬಂತೆ.[೪]


                                         © Stfner Schuen

           (All rights reserved. Plagiarism will result in ripping you off)

1 comment:

Categories (ವಿಭಾಗಗಳು)

Subscribe to RSS Feed Follow me on Twitter!